ಮುದ್ದೇಬಿಹಾಳ ಒಂದು ನಗರ ಹಾಗೂ ತಾಲ್ಲೂಕು ಕೇಂದ್ರ .ಇದು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯಲ್ಲಿದೆ. ಮುದ್ದೇಬಿಹಾಳ ಪಟ್ಟಣವು ವಿಜಯಪುರ - ಮುದ್ದೇಬಿಹಾಳ ರಾಜ್ಯ ಹೆದ್ದಾರಿಯಲ್ಲಿದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು ೮೦ ಕಿ.ಮಿ. ದೂರ ಇದೆ. ಮುದ್ದೇಬಿಹಾಳದಲ್ಲಿ ಒಳ್ಳೆಯ ಶಿಕ್ಷಣ ಕೇಂದ್ರ, ವ್ಯಾಪಾರ ಕೇಂದ್ರ, ಹಣಕಾಸು ಕೇಂದ್ರ, ಸಾರಿಗೆ ಕೇಂದ್ರ, ನೆಮ್ಮದಿ ಕೇಂದ್ರ, ಉಪ ತಹಶಿಲ್ದಾರರ ಕಚೇರಿ, ಬಿ.ಎಸ್.ಎನ್.ಎಲ್ ಕಚೇರಿ, ರೈತ ಸಂಪರ್ಕ ಕೇಂದ್ರ, ಬಸ್ ನಿಲ್ದಾಣ, ಅಂಚೆ ಕಚೇರಿ, ಬ್ಯಾಂಕಗಳು ಹಾಗೂ ಇತರೆ ಕಚೇರಿಗಳಿವೆ. == ಚರಿತ್ರೆ == ಬಾಸರಗೌಡ ನಾಡಗೌಡರ ಪೂರ್ವಜರಾದ ಪರಮಣ್ಣನವರಿಂದ ೧೬೮೦ ರಲ್ಲಿ ಸ್ಥಾಪಿಸಲಾಯಿತು.ಅದೇ ಮನೆತನದ ಹುಚ್ಚಪ್ಪನವರು ೧೭೨೦ ರಲ್ಲಿ ಕೋಟೆ ಕಟ್ಟಿಸಿದ್ದರು. ಮುದ್ದೇಬಿಹಾಳ ನಗರವು ವಿಜಯಪುರ ಜಿಲ್ಲೆಯ ಪಡುಮೂಲೆಯ ಒಂದು ತಾಲೂಕು. ಹೀಗೆ ಪಡುಮೂಲೆಯ ತಾಲೂಕೆಂದು ಹೆಸರು ಬರಲು ತಾಲೂಕಿನ ತಾಳಿಕೋಟಿ, ಪ್ರಸಿದ್ಧ ವ್ಯಾಪಾರ ಕೇಂದ್ರವಾಗಿರುವುದೇ ಕಾರಣ. ತಾಳಿಕೋಟಿಯು ತಾಲೂಕು ಕೇಂದ್ರ ಮುದ್ದೇಬಿಹಾಳಕ್ಕಿಂತ ವ್ಯಾಪಾರ ಮುಂತಾದ ಕ್ಷೇತ್ರಗಳಲ್ಲಿ ಮುಂದಿದೆ. ಜಿಲ್ಲೆಯ ಅತ್ಯಂತ ಚಿಕ್ಕ ಗಾತ್ರದ ತಾಲೂಕು. ಐತಿಹಾಸಿಕವಾಗಿ ಪ್ರಸಿದ್ಧವಾದ ಅನೇಕ ಸ್ಥಳಗಳು ಇಲ್ಲಿವೆ. ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಕಾರಣವಾದ ೧೫೬೫ರ ತಾಳಿಕೋಟಿ(ರಕ್ಕಸ ತಂಗಡಗಿ) ಯುದ್ಧ ಸ್ಥಳಗಳು ಇಲ್ಲಿವೆ. ಈ ತಾಲೂಕಿನಲ್ಲಿ ಒಟ್ಟು ೩೧ ಗ್ರಾಮ ಪಂಚಾಯತಿಗಳು ಹಾಗೂ ೪ ಹೋಬಳಿಗಳನ್ನು ಒಳಗೊಂಡಿದೆ. ೪ ಹೋಬಳಿಗಳೆಂದರೆ, ೧) ಮುದ್ದೇಬಿಹಾಳ ೨) ತಾಳಿಕೋಟಿ ೩) ನಾಲತವಾಡ ಹಾಗೂ ೪) ಢವಳಗಿ ಇಲ್ಲಿರುವ ಒಂದು ಈಶ್ವರ ದೇವಾಲಯ ಪ್ರಸಿದ್ದ. ಬಸರಕೋಡ ಗ್ರಾಮದಲ್ಲಿ ಜಕಣಾಚಾರ್ಯರಿಂದ ನಿರ್ಮಿತವಾದ ಒಂದು ಜೈನ ದೇವಾಲಯವು,೧೭೫೦ ರಲ್ಲಿ ಮಲ್ಲಿಕಾರ್ಜುನ,೧೮೦೫ ರಲ್ಲಿ ೩ಲಿಂಗ ಗುಡಿ. ೨ ಮಸೀದಿಗಳಲ್ಲಿ ಪಾಂಚ್ ಪೀರ್ ಮಸೀದಿ-ಪಂಚ ಪಾಂಡವ ದೇವಾಸ್ಥಾನವೆಂದು ಹಿಂದುಗಳಿಗೆ ಪ್ರಸಿದ್ದವಾಗಿದೆ. ಮುದ್ದೇಬಿಹಾಳ ಪುರಸಭೆ 2013-08-10 ವೇಬ್ಯಾಕ್ ಮೆಷಿನ್ ನಲ್ಲಿ. == ಧಾರ್ಮಿಕ ಕೇಂದ್ರಗಳು == ಬಸರಕೋಡ - ಅಮರ ಶಿಲ್ಪಿ ಜಕನಾಚಾರಿಯಿಂದ 1805ರಲ್ಲಿ ಮಲ್ಲಿಕಾರ್ಜುನ ಮತ್ತು ಮೂರು ಲಿಂಗ ದೇವಾಲಯಗಳ ನಿರ್ಮಾಣವಾಗಿದೆ ಎನ್ನುತ್ತಾರೆ. ನಾಲತವಾಡ - ಮಹಾ ದಾಸೋಹಿ ಮಹಾ ಶಿವಶರಣ ಶ್ರೀ ವೀರೇಶ್ವರ ಶರಣರ ಮಹಾಮಠ ವಿದೆ. ತಾಳಿಕೋಟೆ - ಶ್ರೀ ಖಾಸ್ಗತೇಶ್ವರ ಮಹಾಸ್ವಾಮಿಗಳ ಮಠವಿದೆ. == ಭೌಗೋಳಿಕ == ಕರ್ನಾಟಕದ ಉತ್ತರದ ಗಡಿಯಲ್ಲಿರುವ ಮುದ್ದೇಬಿಹಾಳ ತಾಲ್ಲೂಕವು ಉತ್ತರಕ್ಕೆ ಸಿಂದಗಿ ಜಿಲ್ಲೆ , ಪಶ್ಚಿಮಕ್ಕೆ ಬಸವನ ಬಾಗೇವಾಡಿ ತಾಲ್ಲೂಕು ಮತ್ತು ವಿಜಯಪುರ ತಾಲ್ಲೂಕು, ದಕ್ಷಿಣಕ್ಕೆ ರಾಯಚೂರ ಜಿಲ್ಲೆ ಮತ್ತು ಪೂರ್ವಕ್ಕೆ ಗುಲ್ಬರ್ಗಾ ಜಿಲ್ಲೆ ಇದೆ. ಈ ತಾಲ್ಲೂಕದ ವಿಸ್ತೀರ್ಣ ೨೨೨೫ ಚ.ಕಿಮೀ ಮತ್ತು ವಾರ್ಷಿಕ ಮಳೆ ೫೯.೫ ಸೆ.ಮೀ. ಇದೆ. ಮುದ್ದೇಬಿಹಾಳ ತಾಲ್ಲೂಕವು ೧೪೩ ಹಳ್ಳಿಗಳು, ೩೨ ಗ್ರಾಮ ಪಂಚಾಯತಗಳು, ೪ ಹೊಬಳಿಗಳನ್ನೊಳಗೊಂಡಿದೆ. ಕರ್ನಾಟಕ ಸರ್ಕಾರವು ಫೆಬ್ರುವರಿ ೮, ೨೦೧೩ ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ತಾಳಿಕೋಟಿ ನಗರವನ್ನು ಹೊಸ ತಾಲ್ಲೂಕನ್ನಾಗಿ ರಚಿಸಿದೆ. == ಹವಾಮಾನ == ಬೇಸಿಗೆ-ಚಳಿಗಾಲ- ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ವಿಜಯಪುರದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣತೆ ಅಂದರೆ 42.7 ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ 9.5 ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ. ಬೇಸಿಗೆ ಕಾಲ - 35° - 42° ಡಿಗ್ರಿ ಸೆಲ್ಸಿಯಸ್ ಚಳಿಗಾಲ ಮತ್ತು ಮಳೆಗಾಲ - 18° - 28°Cಡಿಗ್ರಿ ಸೆಲ್ಸಿಯಸ್ ಮಳೆ - ಪ್ರತಿ ವರ್ಷ ಮಳೆ 300 - 600ಮಿಮಿ ಗಳಸ್ಟು ಆಗಿರುತ್ತದೆ. ಗಾಳಿ - ಗಾಳಿ ವೇಗ 18.2 ಕಿಮಿ/ಗಂ (ಜೂನ), 19.6 ಕಿಮಿ/ಗಂ (ಜುಲೈ)ಹಾಗೂ 17.5 ಕಿಮಿ/ಗಂ (ಅಗಸ್ಟ್) ಇರುತ್ತದೆ. == ಮಳೆ ಮಾಪನ ಕೇಂದ್ರಗಳು == ಮುದ್ದೇಬಿಹಾಳ - ತಾಳಿಕೋಟ, ನಾಲತವಾಡ, ಢವಳಗಿ, ನಾರಾಯಣಪುರ. == ಸಾಂಸ್ಕೃತಿಕ == ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮಿಶ್ರಿತ ವಿಶಿಷ್ಠವಾದ ಕನ್ನಡ ವಿಜಯಪುರ ಕನ್ನಡವೆಂದೇ ಗುರುತಿಸಲ್ಪಡುತ್ತದೆ. ಒಕ್ಕಲುತನ ಮುಖ್ಯ ಉದ್ಯೋಗ. ಜೊತೆಗೆ ಕೆಲವೊಂದು ಗ್ರಾಮಗಳಲ್ಲಿ (ಚಡಚಣ, ತಾಂಬಾ, ವಂದಾಲ ಮುಂ.)ನೇಕಾರಿಕೆ ಇದೆ. ಪ್ರಮುಖ ಬೆಳೆಗಳು: ಜೋಳ, ಸಜ್ಜೆ, ಶೇಂಗಾ, ಚಿಕ್ಕು, ಸೂರ್ಯಕಾಂತಿ, ಉಳ್ಳಾಗಡ್ಡಿ (ಈರುಳ್ಳಿ). ವಿಜಯಪುರದ ದ್ರಾಕ್ಷಿ, ದಾಳಿಂಬೆ, ನಿಂಬೆ ಹಣ್ಣುಗಳು ಪರರಾಜ್ಯ ಹಾಗೂ ಪರದೇಶಗಳಿಗೆ ರಫ್ತು ಆಗುತ್ತವೆ. == ಆಹಾರ (ಖಾದ್ಯ) == ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ, ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ವಿಜಯಪುರ ದ ಜೋಳದ ರೊಟ್ಟಿ , ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರುಗಳು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ. == ಸಾಕ್ಷರತೆ == ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಸಾಕ್ಷರತೆಯು 2011 ವರ್ಷದ ಪ್ರಕಾರ 67%. ಅದರಲ್ಲಿ 77% ಪುರುಷರು ಹಾಗೂ 56% ಮಹಿಳೆಯರು ಸಾಕ್ಷರತೆ ಹೊಂದಿದೆ. ತಾಲ್ಲೂಕಿನಲ್ಲಿ ಪುರುಷರು 2.5 ಲಕ್ಷಕ್ಕೂ ಹೆಚ್ಚು ಪುರುಷರು ಮತ್ತು 2 ಲಕ್ಷಕ್ಕೂ ಹೆಚ್ಚು ಮಹಿಳೆಯರು ಒಟ್ಟಾರೆಯಾಗಿ 4 ಲಕ್ಷಕ್ಕೂ ಹೆಚ್ಚು ಸಾಕ್ಷರರಾಗಿದ್ದಾರೆ. == ಜನಸಂಖ್ಯೆ == ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಜನಸಂಖ್ಯೆಯು 2011ನೇ ಜನಗಣತಿಯ ಪ್ರಕಾರ ಸುಮಾರು 4.5 ಲಕ್ಷಕ್ಕೂ ಹೆಚ್ಚು ಇದೆ. 3 ಲಕ್ಷಕ್ಕೂ ಹೆಚ್ಚು ಪುರುಷರು ಮತ್ತು 2 ಲಕ್ಷಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಅದರಂತೆ ಮುದ್ದೇಬಿಹಾಳ ನಗರದ ಜನಸಂಖ್ಯೆಯು 50 ಲಕ್ಷಕ್ಕೂ ಅಧಿಕವಾಗಿದೆ. ಪ್ರತಿಶತ 70%ಗಿಂತಲು ಹೆಚ್ಚು ಜನಸಂಖ್ಯೆ ಗ್ರಾಮೀಣ ಭಾಗದಲ್ಲಿ ವಾಸವಾಗಿದ್ದಾರೆ. ತಾಲ್ಲೂಕಿನಲ್ಲಿ ಲಿಂಗಾನುಪಾತ ಪ್ರತಿ 1000 ಪುರುಷರಿಗೆ 940 ಜನ ಮಹಿಳೆಯರಿದ್ದಾರೆ. ಕರ್ನಾಟಕದಲ್ಲಿ 3.56% ಜನಸಂಖ್ಯೆ ಹೊಂದಿದೆ. == ಭಾಷೆಗಳು == ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ, ಉರ್ದು ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ. ಅದರಂತೆ ಲಂಬಾಣಿ ಜನಾಂಗದವರು ಲಂಬಾಣಿ ಭಾಷೆಯನ್ನು ಮಾತನಾಡುತ್ತಾರೆ. == ದೇವಾಲಯಗಳು == ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಪಾಂಡುರಂಗ - ವಿಠ್ಠಲ ದೇವಸ್ಥಾನ ಹಾಗೂ ಶ್ರೀ ಹಣಮಂತ ದೇವಾಲಯ ನಾಗಲಿಂಗೇಶ್ವರ ,ಪವಾಡ ಬಸವೇಶ್ವರ ದೇವಾಲಯಗಳನ್ನು ನಿರ್ಮಿಸಿದ್ದಾರೆ. == ಮಸೀದಿಗಳು == ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ. == ಹಬ್ಬಗಳು == ಪ್ರತಿವರ್ಷ ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ. == ಕೃಷಿ == ಕೃಷಿ ಮುದ್ದೇಬಿಹಾಳ ತಾಲ್ಲೂಕಿನ ಮುಖ್ಯ ವೃತ್ತಿ. ಕೃಷಿಗೆ ನೀರಿನ ಸರಬರಾಜು ಆಲಮಟ್ಟಿಯಲ್ಲಿನ ಕೃಷ್ಣಾ ಅಣೆಕಟ್ಟಿನಿಂದ ಆಗುತ್ತದೆ. ಇಲ್ಲಿ ಬೆಳೆಯಲ್ಪಡುವ ಮುಖ್ಯ ಬೆಳೆಗಳು ಜೋಳ, ನೆಲಗಡಲೆ (ಶೆಂಗಾ), ಸೂರ್ಯಕಾಂತಿ ಮತ್ತು ಕಬ್ಬು ಇತ್ಯಾದಿ. == ನೀರಾವರಿ == ಮುದ್ದೇಬಿಹಾಳ ತಾಲ್ಲೂಕಿನ ಪ್ರತಿಶತ ೩೦ ಭಾಗ ಭೂಮಿ ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ. == ಸಂಸ್ಕೃತಿ == ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ.ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ. ಮಹಿಳೆ ಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ. ಜಿಲ್ಲೆಯಲ್ಲಿ ಲಂಬಾಣಿ ಜನಾಂಗವು ವಿಶೇಷವಾಗಿದೆ. == ಕಲೆ == ಲಾವಣಿ ಪದಗಳು, ಡೊಳ್ಳು ಕುಣಿತ, ಗೀಗೀ ಪದಗಳು, ಹಂತಿ ಪದಗಳು ಮತ್ತು ಮೊಹರಮ್ ಹೆಜ್ಜೆ ಕುಣಿತ ಮುಂತಾದವುಗಳು ಈ ನಾಡಿನ ಕಲೆಯಾಗಿದೆ. == ಆರ್ಥಿಕತೆ == ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದಿದೆ. == ವ್ಯಾಪಾರ == ಮುದ್ದೇಬಿಹಾಳ ಮತ್ತು ತಾಳಿಕೋಟಿ ನಗರವು ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿದೆ. ಜಿಲ್ಲೆಯ ಚಡಚಣ ಪಟ್ಟಣವು ಜವಳಿ ಉದ್ಯಮಕ್ಕೆ ಪ್ರಸಿದ್ದಿಯಾಗಿದೆ. == ಉದ್ಯೋಗ == ಫಲವತ್ತಾದ ಭೂಮಿ ಇದುವುದರಿಂದ ಸುಮಾರು 70% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಜಿಲ್ಲೆಯ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ತಯಾರಿಕೆ, ಕುರಿ ಮತ್ತು ಆಡು ಸಾಕಾಣಿಕೆ ಉಪ ಕಸುಬುಗಳಾಗಿವೆ. == ಶಿಕ್ಷಣ == ಪ್ರಮುಖ ಶಿಕ್ಷಣ ಸಂಸ್ಥೆಗಳು ಸರಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ, ಮುದ್ದೇಬಿಹಾಳ ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ, ಮುದ್ದೇಬಿಹಾಳ ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ, ಮುದ್ದೇಬಿಹಾಳ ಸರಕಾರಿ ಉರ್ದು ಪ್ರೌಡ ಶಾಲೆ, ಮುದ್ದೇಬಿಹಾಳ ಲಯನ್ಸ್ ಶಾಲೆ, ಮುದ್ದೇಬಿಹಾಳ ಸರಕಾರಿ ಪ್ರೌಡ ಶಾಲೆ, ಮುದ್ದೇಬಿಹಾಳ ಜ್ಣಾನಭಾರತಿ ಪ್ರೌಡ ಶಾಲೆ, ಮುದ್ದೇಬಿಹಾಳ ವಿ.ಬಿ.ಸಿ. ಪ್ರೌಡ ಶಾಲೆ, ಮುದ್ದೇಬಿಹಾಳ ಎಮ್.ಜಿ.ಎಮ್.ಕೆ.(ಆಂಗ್ಲ ಮಾಧ್ಯಮ) ಪ್ರೌಡ ಶಾಲೆ, ಮುದ್ದೇಬಿಹಾಳ ಎಮ್.ಜಿ.ವಿ.ಸಿ. ಪದವಿಪೂರ್ವ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಮುದ್ದೇಬಿಹಾಳ ಎಮ್.ಜಿ.ಎಮ್.ಕೆ. ಪದವಿಪೂರ್ವ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಮುದ್ದೇಬಿಹಾಳ ಅಂಜುಮನ್ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಮುದ್ದೇಬಿಹಾಳ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಮುದ್ದೇಬಿಹಾಳ ಎಮ್.ಜಿ.ವಿ.ಸಿ. ಕಲಾ, ವಾಣಿಜ್ಯ ಮತ್ತು ವಿಜ್ಣಾನ ಮಹಾವಿದ್ಯಾಲಯ, ಮುದ್ದೇಬಿಹಾಳ ಶ್ರೀ ವೀರೇಶ್ವರ ಕಲಾ ಮಹಾವಿದ್ಯಾಲಯ, ನಾಲತವಾಡ, ಮುದ್ದೇಬಿಹಾಳ ಶ್ರೀ ಸಿದ್ರಾಮೇಶ್ವರ ಕೈಗಾರಿಕಾ ತರಬೇತಿ ಕೇಂದ್ರ, ಮುದ್ದೇಬಿಹಾಳ ಬಾಪೂಜಿ ಕೈಗಾರಿಕಾ ತರಬೇತಿ ಕೇಂದ್ರ, ಮುದ್ದೇಬಿಹಾಳ ಎ.ಪಿ.ಜೆ.ಅಬ್ದುಲ್ ಕಲಾಮ್ ಕೈಗಾರಿಕಾ ತರಬೇತಿ ಕೇಂದ್ರ, ಮುದ್ದೇಬಿಹಾಳ ಮಾತೋಶ್ರೀ ಗಂಗಮ್ಮ ವೀರಪ್ಪ ಚಿನಿವಾರ ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ಮುದ್ದೇಬಿಹಾಳ ಶಿವಯೋಗಿ ಸಂಗಮಾರ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ಮುದ್ದೇಬಿಹಾಳ ಶ್ರೀ ವೀರೇಶ್ವರ ಶಿಕ್ಷಣ ಮಹಾವಿದ್ಯಾಲಯ, ನಾಲತವಾಡ, ಮುದ್ದೇಬಿಹಾಳ == ಪ್ರಮುಖ ವ್ಯಕ್ತಿಗಳು == ಶ್ರೀ ಖಾಸ್ಗತೇಶ್ವರ ಮಹಾಸ್ವಾಮಿಜಿಗಳು ಅರವಿಂದ ಮಾಲಗತ್ತಿ ರಾಜು ತಾಳಿಕೋಟಿ ಕೃಷ್ಣ ಗೋಪಾಲ ಜೋಶಿ ಎಚ್ ಬಿ ವಾಲೀಕಾರ == ರಾಜಕೀಯ == ಮುದ್ದೇಬಿಹಾಳ ತಾಲ್ಲೂಕು ಬಿಜಾಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರವಾಗಿದೆ. ಮುದ್ದೇಬಿಹಾಳ ಪುರಸಭೆಯು 1973ರಲ್ಲಿ ರಚನೆಯಾಯಿತು. ಮುದ್ದೇಬಿಹಾಳ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್ ಗಳಿದ್ದು 23 ಚುನಾಯಿತ ಸದಸ್ಯರು ಹಾಗೂ 5 ನಾಮನಿರ್ದೇಶಿತ ಸದಸ್ಯರಿರುತ್ತಾರೆ. ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಮುದ್ದೇಬಿಹಾಳ ಮತಕ್ಷೇತ್ರ(2018)ದಲ್ಲಿ 1,03,038 ಪುರುಷರು, 97,844 ಮಹಿಳೆಯರು ಸೇರಿ ಒಟ್ಟು 2,00,882 ಮತದಾರರಿದ್ದಾರೆ. ಕ್ಷೇತ್ರದ ಇತಿಹಾಸ ಆಂಗ್ಲರ ಅಧಿಪತ್ಯ ಅಳಿದು 70 ವರ್ಷಗಳಾದರೂ ಮುದ್ದೇಬಿಹಾಳ ವಿಧಾನಸಭೆ ಕ್ಷೇತ್ರದ ಮತದಾರ ಪ್ರಭು ಇನ್ನೂ ದೇಸಗತಿ ಮನೆತನಕ್ಕೆ ಮಣೆ ಹಾಕುತ್ತಿರುವುದು ಕ್ಷೇತ್ರದ ವಿಶೇಷ. ಊಳುವವನೇ ಒಡೆಯ ಕಾಯ್ದೆಯನ್ವಯ ನೂರಾರು ಎಕರೆ ಜಮೀನು ಬಿಟ್ಟುಕೊಟ್ಟ ಶಾಸಕ ಸಿ.ಎಸ್. ನಾಡಗೌಡ ಹಾಗೂ ಜಗದೇವರಾವ ದೇಶಮುಖ ಮನೆತನಕ್ಕೆ ಇಲ್ಲಿನ ಮತದಾರರು ಅಧಿಕಾರದ ಫಲ ನೀಡುತ್ತಲೇ ಇದ್ದಾರೆ. 1978 ರಿಂದ 2018ರವರೆಗೆ ಸುಮಾರು 40 ವರ್ಷಗಳ ಕಾಲ ಚುನಾವಣೆವರೆಗಿನ ಕ್ಷೇತ್ರದ ಇತಿಹಾಸ ಗಮನಿಸಿದಾಗ ಹೆಚ್ಚಿನ ಅಧಿಕಾರ ಅನುಭವಿಸಿದ್ದು ಇದೇ ಎರಡು ಮನೆತಗಳು ಎಂಬುದು ಗಮನಾರ್ಹ. ದೇಶಮುಖ ಮನೆತನದ ನಾಯಕ ಜಗದೇವರಾವ ಸಂಗನಬಸಪ್ಪ ದೇಶಮುಖರು ಸತತ ಮೂರು ಬಾರಿ ಕ್ಷೇತ್ರದಲ್ಲಿ ವಿಜಯ ಪತಾಕೆ ಹಾರಿಸಿದ್ದರು. ಅವರ ಅಕಾಲಿಕ ನಿಧನ ಬಳಿಕ ಕ್ಷೇತ್ರ ಕೈ ತಪ್ಪಿತು. ಮಧ್ಯಂತರದಲ್ಲಿ ಅಧಿಕಾರ ಕಸಿದುಕೊಂಡಿದ್ದ ಸಿ.ಎಸ್. ನಾಡಗೌಡರಿಂದ ಮತ್ತೆ ಕ್ಷೇತ್ರ ಕೈವಶ ಮಾಡಿಕೊಳ್ಳುವಲ್ಲಿ ಜಗದೇವರಾವ ಅವರ ಪತ್ನಿ ವಿಮಲಾಬಾಯಿ ಸಫಲರಾದರು. 1994ರಲ್ಲಿ ಅನುಕಂಪದ ಆಧಾರದ ಮೇಲೆ ವಿಮಲಾದೇವಿ ಭರ್ಜರಿ ಜಯಸಾಧಿಸಿದರು. ಕ್ಷೇತ್ರದ ವಿಶೇಷತೆ 1957ರಲ್ಲಿ ಸಿದ್ಧಾಂತಿ ಪ್ರಾಣೇಶ ಗುರುಭಟ್ಟ (ಬ್ರಾಹ್ಮಣ), 1972ರಲ್ಲಿ ಮಲ್ಲಪ್ಪ ಮುರಗೆಪ್ಪ ಸಜ್ಜನ(ಗಾಣಿಗ) ಶಾಸಕರಾಗಿ ಆಯ್ಕೆಯಾಗಿದ್ದು ಹೊರತುಪಡಿಸಿದರೆ, ಉಳಿದ ಅವಧಿಗೆ (1978ರಿಂದ 2018ರವರೆಗಿನ ನಾಲ್ಕು ದಶಕಗಳ ಅವಧಿ) ಆಯ್ಕೆಯಾದವರು ಪಂಚಮಸಾಲಿ ಮತ್ತು ರಡ್ಡಿ ಸಮುದಾಯದವರು. ಸತತ ಮೂರು ಬಾರಿ ಜೆ.ಎಸ್‌.ದೇಶಮುಖ (ಪಂಚಮಸಾಲಿ), 1994ರಲ್ಲಿ ವಿಮಲಾಬಾಯಿ ದೇಶಮುಖ ಆಯ್ಕೆಯಾದರೆ, ಉಳಿದ 25 ವರ್ಷದ ಅವಧಿ ಸಿ.ಎಸ್‌.ನಾಡಗೌಡ (ರಡ್ಡಿ) ಶಾಸಕರು. ಈ ಅವಧಿಯಲ್ಲಿ ಸ್ಪರ್ಧೆ ನಡೆದಿದ್ದು, ಈ ಎರಡೂ ಮನೆತನಗಳ ನಡುವೆಯೇ. ಒಮ್ಮೆ ಮಾತ್ರ ಬಿಜೆಪಿಯ ಮಂಗಳಾದೇವಿ ಬಿರಾದಾರ ಪ್ರಬಲ ಪೈಪೋಟಿ ನೀಡಿದ್ದಾರೆ. ಪಕ್ಷವಾರು ಸಾಧನೆ ಪರಿಗಣಿಸಿದರೆ ಸದರಿ ಕ್ಷೇತ್ರ ಕಾಂಗ್ರೆಸ್ ಪಕ್ಷ ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಷೇತ್ರದಲ್ಲಿ ಗೆದ್ದಿದೆ. 1957ರ ಸಾರ್ವತ್ರಿಕ ಚುನಾವಣೆ ಗಣನೆಗೆ ತೆಗೆದುಕೊಳ್ಳುವುದಾದರೆ ಅಂದಿನ ಭಾರತೀಯ ಕಾಂಗ್ರೆಸ್ ಪಕ್ಷದ ಸಿದ್ಧಾಂತಿ ಪ್ರಾಣೇಶ ಗುರುಭಟ್ಟರು, ಆ ಬಳಿಕ ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ, ಹಾಗೂ ಮಲ್ಲಪ್ಪ ಮುರಗೆಪ್ಪ ಸಜ್ಜನ ಸಾಲಾಗಿ ಆಯ್ಕೆಯಾಗಿದ್ದು ಕಾಂಗ್ರೆಸ್ ಸಾಧನೆ. ಪ್ರಪ್ರಥಮ ಬಾರಿಗೆ ಜನತಾ ಪಕ್ಷದಿಂದ ಜಗದೇವರಾವ ಅವರು ಅಧಿಕಾರ ಕಸಿದುಕೊಂಡು ಹ್ಯಾಟ್ರಿಕ್ ಸಾಧನೆ ಮೆರೆದರು. 1966ರಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಕ್ಷೇತ್ರಗಳ ಪುನರ್ವಿಂಗಡಣೆಯಾದ ಬಳಿಕ ತಾಳಿಕೋಟೆ ಕ್ಷೇತ್ರವು ಮುದ್ದೇಬಿಹಾಳ ಕ್ಷೇತ್ರದಲ್ಲಿ ವಿಲೀನವಾಯಿತು. ಮೊದಲೆರಡು ಚುನಾವಣೆಯಲ್ಲಿ ಪ್ರತ್ಯೇಕ ವಿಧಾನಸಭೆ ಕ್ಷೇತ್ರವಾಗಿದ್ದ ತಾಳಿಕೋಟೆಯಿಂದ 1957ರಲ್ಲಿ ಕುಮಾರಗೌಡ ಅಡಿವೆಪ್ಪಗೌಡ ಪಾಟೀಲರು ಸ್ವತಂತ್ರ ಅಭ್ಯರ್ಥಿಯಾಗಿ(15,200) ಗೆಲುವು ಸಾಧಿಸಿದರು. ಇವರ ವಿರುದ್ಧ ಭಾರತೀಯ ಕಾಂಗ್ರೆಸ್ ಪಕ್ಷದಿಂದ ಶರಣಯ್ಯ ಬಸಲಿಂಗಯ್ಯ ವಸ್ತ್ರದ (12,804) ಪರಾಜಯಗೊಂಡರು. ಆ ಬಳಿಕ 1962ರಲ್ಲಿ ಗದಿಗೆಪ್ಪಗೌಡ ನಿಂಗನಗೌಡ ಪಾಟೀಲ ಭಾರತೀಯ ಕಾಂಗ್ರೆಸ್ನಿಂದ ಅವಿರೋಧ ಆಯ್ಕೆಯಾದರು. ಜಗದೇವರಾವ ಅವರು ವಿದ್ಯುತ್ ಖಾತೆ ಸಚಿವರು, ಅವರ ಪತ್ನಿ ವಿಮಲಾಬಾಯಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಶಾಸಕ ಸಿ.ಎಸ್.ನಾಡಗೌಡರು ಕಾರ್ಮಿಕ ಸಚಿವ ಮತ್ತು ಸರ್ಕಾರದ ಮುಖ್ಯ ಸಚೇತಕ, ನವದೆಹಲಿ ವಿಶೇಷ ಪ್ರತಿನಿಧಿಯಾಗಿದ್ದು ಕ್ಷೇತ್ರದ ಮೈಲಿಗಲ್ಲು. ಜನಪ್ರತಿನಿಧಿಗಳ ವಿವರ == ಆರೋಗ್ಯ == ಮುದ್ದೇಬಿಹಾಳ ನಗರದಲ್ಲಿ ಸರಕಾರಿ ತಾಲ್ಲೂಕು ಆಸ್ಪತ್ರೆಯಿದೆ. == ವಿದ್ಯುತ್ ಪರಿವರ್ತನಾ ಕೇಂದ್ರಗಳು == ಮುದ್ದೇಬಿಹಾಳ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಮುದ್ದೇಬಿಹಾಳ ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ತಂಗಡಗಿ ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಢವಳಗಿ ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ನಾಲತವಾಡ ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ತಾಳಿಕೋಟಿ == ಬ್ಯಾಂಕಗಳು == ವಿಜಯ ಬ್ಯಾಂಕ, ಮುದ್ದೇಬಿಹಾಳ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ, ಮುದ್ದೇಬಿಹಾಳ ಡಿ.ಸಿ.ಸಿ. ಬ್ಯಾಂಕ, ಮುದ್ದೇಬಿಹಾಳ ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ, ಮುದ್ದೇಬಿಹಾಳ ಸ್ಟೇಟ್ ಬ್ಯಾಂಕ ಆಫ್ ಇಂಡಿಯಾ, ಮುದ್ದೇಬಿಹಾಳ ಯೂನಿಯನ್ ಬ್ಯಾಂಕ ಆಫ್ ಇಂಡಿಯಾ ಮುದ್ದೇಬಿಹಾಳ ಸಿಂಡಿಕೇಟ್ ಬ್ಯಾಂಕ, ಮುದ್ದೇಬಿಹಾಳ ಕಾರ್ಪೋರೇಶನ್ ಬ್ಯಾಂಕ, ಮುದ್ದೇಬಿಹಾಳ ಕರ್ನಾಟಕ ಸಹಕಾರಿ ಬ್ಯಾಂಕ್, ಮುದ್ದೇಬಿಹಾಳ, ಬಿಜಾಪೂರ.(ಮುಖ್ಯ ಕಚೇರಿ) ಮುಸ್ಲಿಂ ಸಹಕಾರಿ ಬ್ಯಾಂಕ್, ತಾಳಿಕೋಟ, ಮುದ್ದೇಬಿಹಾಳ, ಬಿಜಾಪೂರ.(ಮುಖ್ಯ ಕಚೇರಿ) ತಾಳಿಕೋಟ ಸಹಕಾರಿ ಬ್ಯಾಂಕ್, ತಾಳಿಕೋಟ, ಮುದ್ದೇಬಿಹಾಳ, ಬಿಜಾಪೂರ.(ಮುಖ್ಯ ಕಚೇರಿ) ಭಾವಸಾರ ಕ್ಷತ್ರೀಯ ಸಹಕಾರಿ ಬ್ಯಾಂಕ್, ತಾಳಿಕೋಟ, ಮುದ್ದೇಬಿಹಾಳ, ಬಿಜಾಪೂರ.(ಮುಖ್ಯ ಕಚೇರಿ) ಶ್ರೀ ಶರಣ ವೀರೇಶ್ವರ ಸಹಕಾರಿ ಬ್ಯಾಂಕ್, ನಾಲತವಾಡ, ಮುದ್ದೇಬಿಹಾಳ, ಬಿಜಾಪೂರ.(ಮುಖ್ಯ ಕಚೇರಿ) == ಮುದ್ದೇಬಿಹಾಳ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು == ಅಬ್ಬಿಹಾಳ,ಬಿಜ್ಜೂರಅಡವಿಹುಲಗಬಾಳ, ಅಡವಿಸೋಮನಾಳ, ಅಗಸಬಾಳ, ಆಲಕೊಪ್ಪರ, ಆಲೂರ, ಅಮರಗೋಳ, ಅರಸನಾಳ, ಆರೆಶಂಕರ, ಅರೆಮುರಾಳ, ಬೈಲಕೂರ, ಬಳಬಟ್ಟಿ, ಬಾಳದಿನ್ನಿ, ಬಳಗಾನೂರ, ಬಳವಾಟ, ಬಂಗಾರಗುಂಡ, ಬನೋಶಿ, ಬಸರಕೋಡ, ಬಾವೂರ, ಬೇಲೂರ, ಬಂಟನೂರ, ಬಿದರಕುಂದಿ, ಬಿಳೇಭಾವಿ, ಬೊಳವಾಡ, ಬೊಮ್ಮನಹಳ್ಳಿ , ಬೂದಿಹಾಳ ಪಿ.ಎನ್., ಬೂದಿಹಾಳ ಪಿ.ನಾಲತವಾಡ, ಚಲಮಿ, ಚವನಭಾವಿ, ಚಿರ್ಚನಕಲ್, ಚೋಕಾವಿ, ಚೊಂಡಿ, ದೇವರಹುಲಗಬಾಳ, ದೇವೂರ, ಢವಳಗಿ, ಡೊಂಕಮಡು, ಫತ್ತೇಪೂರ, ಗಡಿಸೋಮನಾಳ, ಗಂಗೂರ, ಗರಸಂಗಿ, ಗೆದ್ದಲಮರಿ, ಗಾಳಿಪೂಜಿ, ಗೋನಾಳ ಪಿ.ಎನ್., ಗೋನಾಳ ಎಸ್.ಎಚ್., ಗೊಟಖಂಡಕಿ, ಗುಡದಿನ್ನಿ, ಗೂಡಿಹಾಳ, ಗುಡ್ನಾಳ, ಗುಂಡಕನಾಳ, ಗುಂಡಕರಜಗಿ, ಗುಟ್ಟಿಹಾಳ, ಹಡಗಲಿ, ಹಡಗಿನಾಳ, ಹಡಲಗೇರಿ, ಹಗರಗೊಂಡ, ಹಳ್ಳೂರ, ಹಂಡರಗಲ್ಲ, ಹಂದ್ರಾಳ, ಹರಿಂದ್ರಾಳ, ಹರನಾಳ, ಹೀರೇಮುರಾಳ, ಹಿರೂರ, ಹೊಕ್ರಾಣಿ, ಹೊಸಹಳ್ಳಿ, ಹುಲ್ಲೂರ, ಹುನಕುಂತಿ, ಹೂವಿನಹಳ್ಳಿ, ಇಣಚಗಲ್, ಇಂಗಳಗೇರಿ, ಜೈನಾಪೂರ, ಜಕ್ಕೇರಾಳ, ಜಲಪೂರ, ಜಂಬಲದಿನ್ನಿ, ಜಂಗಮುರಾಳ, ಜಟ್ಟಗಿ, ಕಲದೇವನಹಳ್ಳಿ, ಕಾಳಗಿ, ಕಮಲದಿನ್ನಿ, ಕಂದಗನೂರ, ಕಾರಗನೂರ, ಕಾಶಿನಕುಂಟೆ, ಕವಡಿಮಟ್ಟಿ, ಕೇಸಾಪೂರ, ಖಾನಾಪೂರ, ಕಿಲಾರಹಟ್ಟಿ, ಕೊಡಗಾನೂರ, ಕೋಳೂರ, ಕೊಣ್ಣೂರ, ಕೊಪ್ಪ, ಕುಚಬಾಳ, ಕುಂಚಗನೂರ, ಕುಂಟೋಜಿ, ಕ್ಯಾತನಡೋಣಿ, ಕ್ಯಾತನಾಳ, ಲಕ್ಕುಂಡಿ, ಲಿಂಗದಳ್ಳಿ, ಲೋಟಗೇರಿ, ಮದರಿ, ಮಡಿಕೇಶ್ವರ, ಮಾದಿನಾಳ, ಮೈಲೇಶ್ವರ, ಮಲಗಲದಿನ್ನಿ, ಮಸ್ಕನಾಳ, ಮಸೂತಿ, ಮಟಕದೇವನಹಳ್ಳಿ, ಮಾವಿನಭಾವಿ, ಮಿಣಜಗಿ, ಮುದ್ನಾಳ, ಮುದೂರ, ಮುಕಿಹಾಳ, ನಡಹಳ್ಳಿ, ನಾಗಬೇನಾಳ, ನಾಗರಬೆಟ್ಟ, ನಾಗರಾಳ, ನಾಗೂರ, ನಾಲತವಾಡ, ನಾವದಗಿ, ನೇಬಗೇರಿ, ನೆರಬೆಂಚಿ, ಪಡೆಕನೂರ, ಪೀರಾಪೂರ, ರಕ್ಕಸಗಿ, ರೂಡಗಿ, ಸಾಲವಾಡಗಿ, ಸರೂರ, ಶಳ್ಳಗಿ, ಶಿರೋಳ, ಶಿವಾಪೂರ, ಸಿದ್ದಾಪುರ ಪಿ.ಟಿ., ಸುಲ್ತಾನಪುರ, ಟಕ್ಕಲಕಿ, ತಮದಡ್ಡಿ, ತಂಗಡಗಿ, ತಪಲಕಟ್ಟಿ, ತಾರನಾಳ, ತುಂಬಗಿ, ವನಹಳ್ಳಿ, ವಡವಡಗಿ, ವಣಕಿಹಾಳ, ಯಲಗೂರ, ಯರಗಲ್ಲ, ಯರಝರಿ.ತಾಂಡಾಗಳು ಇವೆ. == ಮುದ್ದೇಬಿಹಾಳ ತಾಲ್ಲೂಕಿನ ಗ್ರಾಮ ಪಂಚಾಯತಿಗಳು == ಅಡವಿ ಸೋಮನಾಳ, ಆಲೂರ, ಬಿ.ಸಾಲವಾಡಗಿ, ಬಂಟನೂರ, ಬಸರಕೋಡ, ಬಾವೂರ, ಬಿದರಕುಂದಿ, ಬಿಜ್ಜೂರ, ಢವಳಗಿ, ಹಡಲಗೇರಿ, ಹಿರೇಮುರಾಳ, ಹಿರೂರ, ಹುಲ್ಲೂರ, ಇಂಗಳಗೇರಿ, ಕಾಳಗಿ, ಕವಡಿಮಟ್ಟಿ, ಕೊಡಗಾನೂರ, ಕೋಳೂರ, ಕೊಣ್ಣೂರ, ಕುಂಟೋಜಿ, ಮಡಿಕೇಶ್ವರ, ಮಿಣಜಗಿ, ಮೊಕಿಹಾಳ, ಗಬೇನಾಳ, ನಾಲತವಾಡ, ರಕ್ಕಸಗಿ, ರೂಡಗಿ, ತಂಗಡಗಿ, ತುಂಬಗಿ, ಯರಝರಿ, ಯಲಗೂರ. == ಮುದ್ದೇಬಿಹಾಳ ತಾಲ್ಲೂಕಿನ ಪಿನಕೋಡ್ ಸಂಕೇತಗಳು == ಢವಳಗಿ - ೫೮೬೧೧೬, ನಾಲತವಾಡ - ೫೮೬೧೨೪, ತಂಗಡಗಿ - ೫೮೬೧೨೯,ಮುದ್ದೇಬಿಹಾಳ - ೫೮೬೨೧೨, ತಾಳಿಕೋಟಿ - ೫೮೬೨೧೪, == ಮುದ್ದೇಬಿಹಾಳ ತಾಲ್ಲೂಕಿನ ನೆಮ್ಮದಿ ಕೇಂದ್ರಗಳು == ಢವಳಗಿ, ತಾಳಿಕೋಟಿ, ಮುದ್ದೇಬಿಹಾಳ, ನಾಲತವಾಡ. == ಪಟ್ಟಣ ಪಂಚಾಯತಿಗಳು == ಮುದ್ದೇಬಿಹಾಳ ತಾಳಿಕೋಟಿ ನಾಲತವಾಡ == ಆರಕ್ಷಕ (ಪೋಲಿಸ್) ಠಾಣೆ == ಮುದ್ದೇಬಿಹಾಳ ನಗರದ ಪೋಲಿಸ್ ಠಾಣೆಯು ಸುತ್ತಲಿನ ಸುಮಾರು ೫೦ಕ್ಕೂ ಹೆಚ್ಚು ಹಳ್ಳಿಗಳ ವ್ಯಾಪ್ತಿ ಹೊಂದಿದೆ. == ಮುದ್ದೇಬಿಹಾಳ ತಾಲ್ಲೂಕಿನ ಪೋಲಿಸ್ ಠಾಣೆಗಳು == ಪೋಲಿಸ್ ಠಾಣೆ, ಮುದ್ದೇಬಿಹಾಳ ಪೋಲಿಸ್ ಠಾಣೆ, ತಾಳಿಕೋಟ ಹೊರ ಪೋಲಿಸ್ ಠಾಣೆ, ನಾಲತವಾಡ == ಸಕ್ಕರೆ ಕಾರ್ಖಾನೆಗಳು == ಬಾಲಾಜಿ ಸಕ್ಕರೆ ಕಾರ್ಖಾನೆ, ಯರಗಲ್ಲ, ತಾ|| ಮುದ್ದೇಬಿಹಾಳ, ಜಿ|| ಬಿಜಾಪೂರ. == ಪ್ರಾಥಮಿಕ ಆರೋಗ್ಯ ಕೇಂದ್ರಗಳು == ಮುದ್ದೇಬಿಹಾಳ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು ನಾಲತವಾಡ, ಕಾಳಗಿ, ಕೊಣ್ಣೂರ, ಮಡಿಕೇಶ್ವರ, ಕಾರಗನೂರ, ತಮದಡ್ಡಿ, ತಂಗಡಗಿ, ಢವಳಗಿ, ಅಡವಿ ಸೋಮನಾಳ, ಬಂಟನೂರ == ಪಶು ಆಸ್ಪತ್ರೆಗಳು == ಪಶು ಆಸ್ಪತ್ರೆ, ಮುದ್ದೇಬಿಹಾಳ ಪಶು ಚಿಕಿತ್ಸಾಲಯಗಳು ನಾಲತವಾಡ, ಕೊಡಗಾನೂರ, ತಂಗಡಗಿ, ಮಿಣಜಗಿ, ತುಂಬಗಿ, ಕಾಳಗಿ, ಢವಳಗಿ, ರಕ್ಕಸಗಿ, ಬಂಟನೂರ, ಮಡಿಕೇಶ್ವರ, ಯರಝರಿ. ಪ್ರಾಥಮಿಕ ಪಶು ಚಿಕಿತ್ಸಾಲಯಗಳು ಬಸರಕೋಡ, ಅಡವಿ ಸೋಮನಾಳ, ಇಂಗಳಗೇರಿ, ಹಿರೇಮುರಾಳ, ಬಿ.ಸಾಲವಾಡಗಿ, ಕೊಣ್ಣೂರ, ದೇವರ ಹುಲಗಬಾಳ, ತಮದಡ್ಡಿ . == ಆಕರ್ಷಣೆಗಳು == ಈ ತಾಲೂಕಿನಲ್ಲಿ ಕೆಲವು ಇತಿಹಾಸ ಪ್ರಸಿದ್ಧ ಸ್ಥಳಗಳೂ ಇವೆ. ಬಸರಕೋಡ ತಂಗಡಗಿ == ತಾಲ್ಲೂಕು ಪಂಚಾಯತಿಗಳು == ತಾಲ್ಲೂಕು ಪಂಚಾಯತ, ಮುದ್ದೇಬಿಹಾಳ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಒಟ್ಟು 20 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ. ಮುದ್ದೇಬಿಹಾಳ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು ಬಿಜ್ಜೂರ == ಜಿಲ್ಲಾ ಪಂಚಾಯತ == ಮುದ್ದೇಬಿಹಾಳ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು == ಉಚಿತ ಪ್ರಸಾದನಿಲಯಗಳು == ಮುದ್ದೇಬಿಹಾಳ ,ತಾಳಿಕೋಟೆ, ಢವಳಗಿ, ಕೊಡಗಾನೂರ, ಕೊಣ್ಣೂರ, ರಕ್ಕಸಗಿ. == ಗ್ರಂಥಾಲಯಗಳು (ವಾಚನಾಲಯಗಳು) == ನಗರ ಕೇಂದ್ರ ಗ್ರಂಥಾಲಯ, ಮುದ್ದೇಬಿಹಾಳ == ದೂರವಾಣಿ ಸಂಕೇತಗಳು ಹಾಗೂ ವಿನಿಮಯ ಕೇಂದ್ರಗಳು == ಮುದ್ದೇಬಿಹಾಳ - 08356 ಮುದ್ದೇಬಿಹಾಳ ತಾಲ್ಲೂಕಿನಲ್ಲಿರುವ ಬಿ.ಎಸ್.ಎನ್.ಎಲ್ ದೂರವಾಣಿ ವಿನಿಮಯ ಕೇಂದ್ರಗಳು ಬಿ.ಸಾಲವಾಡಗಿ, ಬಸರಕೋಡ, ಢವಳಗಿ, ಹಿರೇಮುರಾಳ, ಹಿರೂರ, ಹುಲ್ಲೂರ, ಗುಂಡಕನಾಳ, ಇಂಗಳಗೇರಿ, ಕೊಣ್ಣೂರ, ಮಡಿಕೇಶ್ವರ, , ಮುದ್ದೇಬಿಹಾಳ , ನಾಲತವಾಡ, ತಂಗಡಗಿ, ತಾಳಿಕೋಟಿ. == ಅಂಚೆ ಕಚೇರಿ ಮತ್ತು ಅಂಚೆ ಸೂಚ್ಯಂಕ ಸಂಖ್ಯೆಗಳು == ತಾಳಿಕೋಟಿ - 586214 (ಬಿ.ಸಾಲವಾಡಗಿ, ಬಳಗಾನೂರ, ಬಂಟನೂರ, ಬಿಳೇಭಾವಿ, ಬೊಮ್ಮನಹಳ್ಳಿ, ಚಬನೂರ, ಗಡಿಸೋಮನಾಳ, ಹಿರೂರ, ಕೊಡಗಾನೂರ, ಮೈಲೇಶ್ವರ, ಮಿಣಜಗಿ, ನಾವದಗಿ, ಪೀರಾಪುರ, ಫತ್ತೇಪುರ, ಸಾಸನೂರ, ತಾಳಿಕೋಟಿ ಬಜಾರ, ತಮದಡ್ಡಿ, ತುಂಬಗಿ). ಮುದ್ದೇಬಿಹಾಳ - 586212 (ಬಾವೂರ, ಬಿದರಕುಂದಿ, ದೇವರಹುಲಗಬಾಳ, ಹಡಲಗೇರಿ, ಹಗರಗೊಂಡ, ಇಂಗಳಗೇರಿ, ಜಂಬಲದಿನ್ನಿ, ಕವಡಿಮಟ್ಟಿ, ಕುಂಟೋಜಿ, ಮಾದಿನಾಳ, ಮುದ್ದೇಬಿಹಾಳ ಬಜಾರ, ಮುದ್ದೇಬಿಹಾಳ ಕೋಟೆ, ಮುಕಿಹಾಳ, ನಾಗೂರ, ನೆರಬೆಂಚಿ, ಶಿವಾಪುರ, ಯರಝರಿ). ತಂಗಡಗಿ - 586129 (ಆಲೂರ, ಅಮರಗೋಳ, ದೇವೂರ, ಹಂಡರಗಲ್ಲ, ಹುನಕುಂತಿ, ಕಂದಗನೂರ, ಕೋಳೂರ, ಕೋಳೂರ ಎಲ್.ಟಿ, ಕುಂಚಗನೂರ, ಮದರಿ, ನೇಬಗೇರಿ, ರಕ್ಕಸಗಿ, ಸರೂರ, ಟಕ್ಕಲಕಿ, ಯರಗಲ್ಲ). ಢವಳಗಿ - 586116 (ಗುಂಡಕರ್ಜಗಿ, ಹಳ್ಳೂರ, ಲಿಂಗದಹಳ್ಳಿ, ಮಡಿಕೇಶ್ವರ, ಪಡೇಕನೂರ, ರೂಡಗಿ, ವನಹಳ್ಳಿ, ಬಳವಾಟ, ಬಸರಕೋಡ). ನಾಲತವಾಡ - 586124 (ಬಿಜ್ಜೂರ, ಹೀರೇಮುರಾಳ, ಅಡವಿಹುಲಗಬಾಳ, ನಾಗಬೇನಾಳ, ನಾಗರಬೆಟ್ಟ, ಸಿದ್ದಾಪುರ ಪಿ.ಎನ್.) == ದೂರವಾಣಿ ಕೈಪಿಡಿ == ಮುದ್ದೇಬಿಹಾಳ ತಾಲ್ಲೂಕು ಸರ್ಕಾರಿ ಕಾರ್ಯಾಲಯಗಳು ತಹಸಿಲ್ದಾರರ ಕಾರ್ಯಾಲಯ - 323750 ಖಜಾನೆ ಕಾರ್ಯಾಲಯ - 323680 ಆಹಾರ ಮತ್ತು ನಾಗರಿಕ ಪುರೈಕೆ ಕಾರ್ಯಾಲಯ - 323220 ಭೂಮಿ ಕಾರ್ಯಾಲಯ - 323050 ಉಪನೋಂದನಿ ಅಧಿಕಾರಿಗಳ ಕಾರ್ಯಾಲಯ - 220297 == ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಬ್ಯಾಂಕಗಳು) == ಮುದ್ದೇಬಿಹಾಳ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಬ್ಯಾಂಕಗಳು) ಬಳಬಟ್ಟಿ, ಬಳಗಾನೂರ, ಬಸರಕೋಡ, ಬಂಟನೂರ, ಬಿದರಕುಂದಿ, ಬೊಮ್ಮನಹಳ್ಳಿ, ಢವಳಗಿ, ಗಾಳಿಪೂಜಿ, ಗರಸಂಗಿ, ಗುಂಡಕನಾಳ, ಹಗರಗೊಂಡ, ಹಿರೂರ, ಹಿರೇಮುರಾಳ, ಹುಲ್ಲೂರ, ಜಂಬಲದಿನ್ನಿ, ಕಂದಗನೂರ, ಕವಡಿಮಟ್ಟಿ, ಕೇಸಾಪುರ, ಕೊಡಗಾನೂರ, ಕೋಳೂರ, ಕೊಣ್ಣೂರ, ಕುಚಬಾಳ, ಲಿಂಗದಳ್ಳಿ, ಮಡಿಕೇಶ್ವರ, ಮಲಗಲದಿನ್ನಿ, ಮಿಣಜಗಿ, ಮುದ್ದೇಬಿಹಾಳ, ಮುಕಿಹಾಳ, ನಾಗಬೇನಾಳ, ನಾಲತವಾಡ, ನಾವದಗಿ, ರಕ್ಕಸಗಿ, ಸರೂರ, ಟಕ್ಕಲಕಿ, ತಮದಡ್ಡಿ, ತಂಗಡಗಿ, ತಾರನಾಳ, ತುಂಬಗಿ, ಯಲಗೂರ, ಯರಝರಿ. == ಕೆರೆಗಳು == ಮುದ್ದೇಬಿಹಾಳ ತಾಲ್ಲೂಕಿನ ಕೆರೆಗಳು ಹೊಕ್ರಾಣಿ, ಮುದ್ನಾಳ, ಗೆದ್ದಲಮರಿ, ಬಸರಕೋಡ, ತಾರನಾಳ, ತಮದಡ್ಡಿ, ಗುಂಡಕರಜಗಿ-ರೂಡಗಿ, ಹಗರಗೊಂಡ, ಅರಸನಾಳ, ಮದಿನಾಳ, ಆಲಕೊಪ್ಪರ, ಅಗಸಬಾಳ, ಇಂಗಳಗೇರಿ-ಗುಡ್ನಾಳ, ಮಡಿಕೆ ಶಿರೂರ, ಅಡವಿ ಹುಲಗಬಾಳ, ಮಲಕಾಪುರ, ತಾರನಾಳ. ಮುದ್ದೇಬಿಹಾಳ ತಾಲ್ಲೂಕಿನ ಜಿನುಗು ಕೆರೆಗಳು ಜಲಪುರ, ವನಹಳ್ಳಿ, ಬಳಗಾನೂರ, ಕೋಳೂರ, ಮಲಗಾಲದಿನ್ನಿ. == ಆಣೆಕಟ್ಟುಗಳು == ನಾರಾಯಣಪುರ ಆಣೆಕಟ್ಟು(ಬಸವ ಸಾಗರ) - ಈ ಆಣೆಕಟ್ಟನ್ನು ಕೃಷ್ಣ ನದಿಗೆ ಅಡ್ಡಲಾಗಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಬಳಿ ಕಟ್ಟಲಾಗಿದೆ. == ಕೃಷಿ ಮಾರುಕಟ್ಟೆಗಳು == ಮುದ್ದೇಬಿಹಾಳ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಮುದ್ದೇಬಿಹಾಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ತಾಳಿಕೋಟ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ನಾಲತವಾಡ == ರೈತ ಸಂಪರ್ಕ ಕೇಂದ್ರಗಳು == ಮುದ್ದೇಬಿಹಾಳ - ತಾಳಿಕೋಟ, ನಾಲತವಾಡ, ಢವಳಗಿ. == ಹಾಲು ಉತ್ಪಾದಕ ಘಟಕಗಳು == ಕೆ.ಎಮ್.ಎಫ್.(ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ)ನ ಸಹಾಯದೊಂದಿಗೆ ವಿಜಯಪುರ ನಗರದ ಹೊರವಲಯದ ಭೂತನಾಳ ಗ್ರಾಮದಲ್ಲಿ ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವನ್ನು ಸ್ಥಾಪಿಸಲಾಗಿದೆ. ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, ಭೂತನಾಳ, ವಿಜಯಪುರ. ಇದನ್ನು ವಿಜಯಪುರ ಡೈರಿಯಂತಲು ಕರೆಯುತ್ತಾರೆ. ಡೈರಿಯು ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಡೈರಿ ಸಹಕಾರಿ ಸಂಘಗಳನ್ನು ಹೊಂದಿದೆ. ಮುದ್ದೇಬಿಹಾಳ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು ಹಂಡರಗಲ್ಲ, ಹುಲ್ಲೂರ, ಕಂದಗನೂರ, ನಾಗರಾಳ, ರೊಡಗಿ, ಯರಝರಿ. == ಬೆಳೆಗಳು == ಆಹಾರ ಬೆಳೆಗಳು ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಅಕ್ಕಿ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ ವಾಣಿಜ್ಯ ಬೆಳೆಗಳು ದ್ರಾಕ್ಷಿ, ದಾಳಿಂಬೆ, ಚಿಕ್ಕು , ನಿಂಬೆ,ಮಾವು, ಬಾಳೆ,ಬಾರಿಹಣ್ಣು , ಕಬ್ಬು , ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ. ತರಕಾರಿ ಬೆಳೆಗಳು ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ. == ಸಸ್ಯಗಳು == ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ. == ಪ್ರಾಣಿಗಳು == ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ. == ಅಗ್ನಿಶಾಮಕ ಠಾಣೆಗಳು == ಅಗ್ನಿಶಾಮಕ ಠಾಣೆ, ಮುದ್ದೇಬಿಹಾಳ == ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು == ರಾಜ್ಯ ಹೆದ್ದಾರಿಗಳು ರಾಜ್ಯ ಹೆದ್ದಾರಿ - 41 => ಶಿರಾಡೋಣ - ಚಡಚಣ - ಝಳಕಿ - ಇಂಡಿ - ದೇವರ ಹಿಪ್ಪರಗಿ - ಹೂವಿನ ಹಿಪ್ಪರಗಿ - ಮುದ್ದೇಬಿಹಾಳ - ನಾರಾಯಣಪುರ - ಲಿಂಗಸಗೂರ. ರಾಜ್ಯ ಹೆದ್ದಾರಿ - 60 => ಸುರಪುರ - ಕೆಂಭಾವಿ - ತಾಳಿಕೋಟ - ಮುದ್ದೇಬಿಹಾಳ - ತಂಗಡಗಿ - ಹುನಗುಂದ. ರಾಜ್ಯ ಹೆದ್ದಾರಿ - 61 => ಮನಗೊಳಿ - ಬಸವನ ಬಾಗೇವಾಡಿ - ತಾಳಿಕೋಟೆ - ಹುಣಸಗಿ - ದೇವಾಪುರ - ದೇವದುರ್ಗ - ಶಿರವಾರ. ರಾಜ್ಯ ಹೆದ್ದಾರಿ - 124 => ಅಫಜಲಪುರ - ಆಲಮೇಲ - ಸಿಂದಗಿ - ತಾಳಿಕೋಟ - ಮಿಣಜಗಿ - ಢವಳಗಿ - ರೂಡಗಿ - ಬಸವನ ಬಾಗೇವಾಡಿ - ಕೊಲ್ಹಾರ - ಬೀಳಗಿ. == ಚಿತ್ರ ಮಂದಿರಗಳು == ಮುದ್ದೇಬಿಹಾಳ 1. ಗಿರಿಜಾ ಶಂಕರ ಚಿತ್ರ ಮಂದಿರ 2. ಲಕ್ಷ್ಮಿ, ಚಿತ್ರ ಮಂದಿರ ತಾಳಿಕೋಟ 1. ಅಮೀರ ಚಿತ್ರ ಮಂದಿರ 2. ಮಹಾವೀರ ಚಿತ್ರ ಮಂದಿರ == ಉಲ್ಲೇಖಗಳು ==